Monday, January 7, 2008

ಅಚ್ಚು ಮೆಚ್ಚಿನ ಗೀತೆಗಳು

ನನ್ನ ೧೦ ಅಚ್ಚು ಮೆಚ್ಚಿನ ಕನ್ನಡ ಚಿತ್ರ ಗೀತೆಗಳು

೧ ದೂಣಿಸಾಗಲಿ
೨ ಅನಿಸುತಿದೆ ಯಾಕೊ ಇ೦ದು
೩ ಶಿವಪ್ಪ ಕಾಯೊ ತ೦ದೆ
೪ ಚ೦ದ ಚ೦ದ
೫ ಮಳೆಯೆ ಬರಲಿ ಬಿಸಿಲೆ ಬರಲಿ
೬ ನೂರು ಜನ್ಮಕು ನೂರರು ಜನ್ಮಕು
೭ ನಗುವ ನಯನ ಮಧುರ ಮೊನ
೮ ಯಾವ ಕಾಣಿಕೆ ನೀಡಲಿ ನಿನಗೆ
೯ ಕೇಳಿ ಪ್ರೆಮಿಗಳೆ
೧೦ ಆಗೊ೦ಬೆಯ ಪ್ರೆಮಸ೦ಜಯ

Wednesday, January 31, 2007

ಜಯ ಭಾರತ ಜನನಿಯ ತನುಜಾತೆ

ಜಯ ಭಾರತ ಜನನಿಯ ತನುಜಾತೆ,ಜಯ ಹೇ ಕರ್ನಾಟಕ ಮಾತೆ
ಜಯ ಸುಂದರ ನದಿವನಗಳ ನಾಡೇ ಜಯ ಹೇ ರಸ ಋಷಿಗಳ ಬೀಡೆ.
ಭೂದೇವಿಯ ಮಕುಟದ ನವಮಣಿಯೆ ಗಂಧದ ಚಂದದ ಹೊನ್ನಿನ ಗಣಿಯೆ
ರಾಘವ ಮಧುಸೂಧನರವತರಿಸಿದ ಭಾರತ ಜನನಿಯ ತನುಜಾತೆ !

ಜನನಿಯ ಜೋಗುಳ ವೇದದ ಘೋಶ,ಜನನಿಗೆ ಜೀವವು ನಿನ್ನಾವೇಶ,
ಹಸುರಿನ ಗಿರಿಗಳ ಸಾಲೇ, ನಿನ್ನಯ ಕೊರಳಿನ ಮಾಲೆ,
ಕಪಿಲ ಪತಂಜಲ ಗೌತಮ ಜಿನನುತ,ಭಾರತ ಜನನಿಯ ತನುಜಾತೆ !

ಶಂಕರ ರಾಮಾನುಜ ವಿದ್ಯಾರಣ್ಯ,ಬಸವೇಶರರಿಹ ದಿವ್ಯಾರಣ್ಯ
ರನ್ನ ಶಡಕ್ಷರಿ ಪೊನ್ನ,ಪಂಪ ಲಕುಮಿಪತಿ ಜನ್ನ
ಕಬ್ಬಿಗರುದಿಸಿದ ಮಂಗಳ ಧಾಮ,ಕವಿ ಕೋಗಿಲೆಗಳ ಪುಣ್ಯಾರಾಮ
ನಾನಕ ರಾಮಾನಂದ ಕಬೀರರ ಭಾರತ ಜನನಿಯ ತನುಜಾತೆ !

ತೈಲಪ ಹೊಯ್ಸಳರಾಳಿದ ನಾಡೇ,ಡಂಕಣ ಜಕಣರ ನಚ್ಚಿನ ಬೀಡೆ
ಕೃಷ್ಣ ಶರಾವತಿ ತುಂಗ,ಕಾವೇರಿಯ ವರ ರಂಗ
ಚೈತನ್ಯ ಪರಮಹಂಸ ವಿವೇಕರ,ಭಾರತ ಜನನಿಯ ತನುಜಾತೆ !

ಸರ್ವ ಜನಾಂಗದ ಶಾಂತಿಯ ತೋಟ,ರಸಿಕರ ಕಂಗಳ ಸೆಳೆಯುವ ನೋಟ
ಹಿಂದೂ ಕ್ರೈಸ್ತ ಮುಸಲ್ಮಾನ,ಪರಸಿಕ ಜೈನರುದ್ಯಾನ
ಜನಕನ ಹೋಲುವ ದೊರೆಗಳ ಧಾಮ,ಗಾಯಕ ವೈನಿಕರಾರಾಮ
ಕನ್ನದ ನುಡಿ ಕುಣಿದಾಡುವ ಗೇಹ,ಕನ್ನದ ತಾಯಿಯ ಮಕ್ಕಳ ದೇಹ
ಭಾರತ ಜನನಿಯ ತನುಜಾತೆ,ಜಯ ಹೇ ಕರ್ನಾಟಕ ಮಾತೆ